ನಿನ್ನ ಪ್ರೀತಿ
ಪ್ರಿಯಾ ನಿನ್ನ ಪ್ರೀತಿ
ನನ್ನ ಪಾಲಿಗಿರಲಿ
ಆ ಪ್ರೀತಿಗಾಗಿ ನಾನು
ಜನುಮ ಜನುಮ ಕಾಯುವೆನು!!
ಎದೆಯಾಳದಲ್ಲಿ ಅಡಗಿರುವ
ನಿನ್ನ ಪ್ರೀತಿಯನ್ನ
ನಾ ತಾಳೆನು ಚೆಲುವ
ನಾ ತಾಳೆನು!!
ಮನದಾಳದಲ್ಲಿ ನಿನ್ನ
ರೂಪವನ್ನ ಇಟ್ಟು ನಾನು
ಪೂಜಿಸುವೆನು ಗೆಳೆಯ
ಪೂಜಿಸುವೆನು!!
ಸ್ನೇಹ ಎಂಬ ಮಾತಿಲ್ಲಿ
ಪ್ರೀತಿಯಾಯ್ತು ನಮ್ಮಲ್ಲಿ
ನಿನ್ನ ಜೊತೆಗೆ ನಾನೇ ಇರುವೆ
ಈ ಜೀವ ಜನುಮದಲಿ!!
- ಪಿ.ಜಿ.ಜ್ಯೋತಿ
03 Aug 2017, 02:01 pm
Download App from Playstore: