ನಿದಿರೆಯ ಜೊಂಪು

ನಿದಿರೆಯ ಜೊಂಪು ಹತ್ತಿದ ಕೂಡಲೇ
ಪ್ರತ್ಯಕ್ಷ ಆಕಳಿಕೆ ಶುರುವಾಯ್ತು ತೂಕಡಿಕೆ!!
ಮುಗ್ಗರಿಸಿ ಮುಗ್ಗರಿಸಿ ಬಿದ್ದರೂ ಮತ್ತದೇ
ಚಾಳಿ ಅರಿವಿಲ್ಲದಂತೆ ದಾಳಿ ನಡೆಸಿದೆ!!

ಯಾರೋ ನೆತ್ತಿಗೆ ಲಗಾಮು ಕಟ್ಟಿ ಎಳೆದಂತೆ
ಎಷ್ಟೇ ತಡೆದರೂ ಹಿಡಿತಕೆ ಸಿಗದಂತೆ!!
ಸಾಕಾಯ್ತು ಈ ತೂರಾಟದ ಹೋರಾಟ
ಅತಿಯಾಯ್ತು ಈ ನಿದಿರೆಯ ಪರದಾಟ!!

ಎಲ್ಲ ಮರೆತು ಹಾಯಾಗಿ ಮಲಗಿ ಬಿಡಲೇ
ಒಂದು ಕ್ಷಣ ಇಲ್ಲಿ ಯಾರಿಗೂ ತಿಳಿಯದಂತೆ!!
ಅಯ್ಯೋ ಯಾರಾದರೂ ಕಂಡರೆ ನನ್ನನ್ನು
ಎಬ್ಬಿಸಿ ತರುವರೇ ನನ್ನ ನಿದಿರೆಗೆ ಭಂಗ!!

ಎಷ್ಟೇ ಯೋಚಿಸಿದರೂ ಯೋಚನೆಗಳೆಲ್ಲ
ಕನಸೇ ಹೊರತು ಆಲೋಚನೆಯಲ್ಲ!!
ಎಷ್ಟೇ ಯತ್ನಿಸಿದರೂ ನಿದಿರೆಯ ಜೊಂಪು
ತೂಕಡಿಕೆ ನನ್ನಿಂದ ತಲೆಯಲು ಆಗುತ್ತಿಲ್ಲ!!

- ಪಿ.ಜಿ.ಜ್ಯೋತಿ

03 Aug 2017, 04:03 pm
Download App from Playstore: