ರೆಕ್ಕೆ ಮುರಿದ ‌ಹಕ್ಕಿ ನಾನು

ರೆಕ್ಕೆ ಮುರಿದ ಹಕ್ಕಿ ನಾನು
ಹಾರುವಾಸೆ ಮುಗಿದಿಲ್ಲ ನನಗಿನ್ನು
ಬುವಿಯ ಮೇಲೆಯೆ ಉಳಿದುಬಿಡುವನೇನು
ಮತ್ತೆ ಆಗಸವ ನೋಡಲಾರನೇನು
ನನ್ನಾಸೆಗಳೆಲ್ಲ ಬಣ್ಣ ಕಳೆದುಕೊಂಡವೇನು ?

ಮೋಡದೊಳಗೆ ತೂರುವಾಸೆ
ರೆಕ್ಕೆ ಬಿಚ್ಚಿ ಅತ್ತ ಇತ್ತ ಹಾರುವಾಸೆ
ಬಾನಾಡಿಗಳೊಡನೆ ಆಡುವಾಸೆ
ಬಾನಿಂದ ಬುವಿಯ ನೋಡುವಾಸೆ
ಭುವಿಯ ಮುಟ್ಟಿ ಬಾನಿಗೆ ಚಿಮ್ಮುವಾಸೆ
ಎಲ್ಲವು ನನಗಿನ್ನು ಬರಿಯ ಕನಸೆ ?

ರೆಕ್ಕೆ ಇರದ ನಾನು ಮೂಕ‌ವಿನ್ನು
ನಗುವ ತುಂಬಿ ಹಾಡಲಾಗದ ಹಕ್ಕಿ‌ ನಾನು‌
ಹಾರಿ‌ ಹುಡುಕಿ ಹೆಕ್ಕಿ ತಿನ್ನುವಾಸೆ ಸುಳ್ಳಾಯಿತೇನು
ದೂರ ಸಾಗುವ ಆಸೆ ಬಹು ದೂರವಿನ್ನು
ನನಗೇನೆ ನಾನು ಭಾರವಾದೆನು
ಆಗಸವು ಕನಸಷ್ಟೆ ಉಸಿರೋಗುವವರೆಗೆ ಇನ್ನು

- ಶ್ರೀಕಾವ್ಯ

05 Aug 2017, 08:44 am
Download App from Playstore: