ನೆನಪಿನ ನೋವು
ಬೇಸಿಗೆಯಲೂ ಹೃದಯವನು
ನೆನೆಸಿಟ್ಟಳು ಒಲವ ಮಳೆ ಸುರಿಸಿ...
ಬಿಟ್ಟೋದಳು ಅತ್ತರೂ ಕಾಣಿಸಿದ
ಮಳೆಗಾಲದಲಿ ಕಣ್ಣೀರು ತರಿಸಿ...
ಜೊತೆಗಿದ್ದಾಗ ಅವಳ ಮನದಲ್ಲೇನಿತ್ತೋ
ನಾ ಅರಿಯಲಾಗಲಿಲ್ಲ...
ದೂರಾಗುವಾಗ ನನ್ನ ಮನಕ್ಕಾಗುವ ನೋವು
ಅವಳಿಗೆ ತಿಳಿಯಲಿಲ್ಲ...
ಕೇಳಲು ಕಾತುರದಿಂದ ಕಾಯುತ್ತಿದ್ದೆ
ಅವಳಾಡುವ ಪೆದ್ದು ಮಾತುಗಳ...
ಈಗ ಕೊಟ್ಟೋದಳು ಮರೆತರು
ಮರೆಯಲಾಗದ ಲೆಕ್ಕವಿಡದಷ್ಟು ನೆನಪುಗಳ.....
---- ಧರ್ಮ ರಾಜ್
- ಧರ್ಮರಾಜ್
05 Aug 2017, 11:45 am
Download App from Playstore: