ತಾಯ್ತನವೆಂಬ ಸ್ವತ್ತು

ಪ್ರಿಯವಾಯಿತು ಕೆಮ್ಮಣ್ಣಿನ‌ ಕೆಸರು
ಹುಳಿ ಮಾವಿನ ಹಚ್ಚ ಹಸಿರು
ಅವಳಾಗಲು ಒಡಲು‌ ತುಂಬಿ ಬಸಿರು
ಸಿದ್ಧಳು ತನ್ನೊಡಲ ಸೇರಿದ ಜೀವಕೆ ಕೊಡಲು ತನ್ನ ಉಸಿರು

ಕೂಸ ನೆನೆಯುವಳು ಹಾಕಿ ಅದರಪ್ಪನ ಮುಖದ ಕವಚ
ಕೊಡುವಳು ಆ ಕೂಸಿಗೆ ತನ್ನಮ್ಮನ ಪ್ರೀತಿಯ ಸ್ಪರುಶ
ಬೇಡುವಳು ತನ್ನಪ್ಪನ ಗುಣಗಳು ಸೇರಲೆಂದು ಪ್ರತಿ ನಿಮಿಷ
ನಗುವಳು, ಉಣ್ಣುವಳು ಕೂಸಿರಬೇಕೆಂದು ಹರುಷ

ನೇವರಿಸುವಳು ತನ್ನೊಡಲ ನೆನೆದು ಕೂಸ ಬಾರಿ ಬಾರಿ
ಆಶಿಸುವಳು‌ ಈ ‌ಕೂಸೆ ಇನ್ನೆಂದು ನನ್ನಾಸೆ ಕನಸಿಗೆ ರೂವಾರಿ
ಆ ಕೂಸ‌ ಮೇಲಿನ ಆಸೆಗಳದೆ ಮನಸಲೆಲ್ಲ‌ ಸವಾರಿ
ಕುಲಾವಿ, ಬೆಳ್ಳಿ ಚಮಚವೆ ಹೇಳುವವು ಆ ಸಂಭ್ರಮದ ಪರಿ

ನೋವನು‌ಣ್ಣ ಬೇಕು ನವಮಾಸ ಕೂಸ ಭಾರವ ಹೊತ್ತು
ಆ ಕೂಸಿನ ಹುಟ್ಟು ತರಬಹುದು ಅವಳ ಜೀವಕೆ‌ ಕುತ್ತು
ಮತ್ತೊಮ್ಮೆ ಹುಟ್ಟಬೇಕವಳು ಪ್ರಸವ ವೇದನೆಯಲಿ ಸತ್ತು
ಆದರವಳಿಗೆ ತಾಯ್ತನಕ್ಕಿಂತ ಬೇರೆಯಾವುದಿಲ್ಲ ಸ್ವತ್ತು

- ಶ್ರೀಕಾವ್ಯ

05 Aug 2017, 03:14 pm
Download App from Playstore: