ನಿನ್ನ ಉಸಿರು

ನನ್ನ ಜೀವಕೆ ಉಸಿರು ನಿನ್ನದೇ
ನನ್ನ ಹೃದಯದಿ‌ ನಿನ್ನ ಹೆಸರಿದೆ!!
ಉಸಿರ‌ ಹೆಸರಲಿ ಪ್ರೀತಿ ಬೆರೆತಿದೆ
ನಿನ್ನ ನೆನೆಯುತ ನಾನು ಬದುಕಿದೆ!!

ಕರುಣೆ ಇಲ್ಲದೇ ನೀ ನನ್ನ ದೂರಿದೆ
ಉಸಿರು ನಿಲ್ಲಿಸಿ ನೀ ದೂರ ಸರಿದೆ!!
ನನ್ನ ಸನಿಹ ನೀ ಬರಲಾರದೇ
ಇಂದು ಹೀಗೇಕೆ ಜಡವಾಗಿ ಹೋದೆ!!

ಪ್ರಶ್ನೆ ನಾ ಕೇಳಲು ಉತ್ತರ ನೀಡದೇ
ಹೇಳು ಯಾಕಾಗಿ ನೀ ಮೌನಿಯಾದೆ!!
ಕಣ್ಣು ಕಂ‌ಬ‌ನಿಯನು ತಾ ಮಿಡಿಯುತ
ಹಂಬಲಿಸಿ ಕೇಳಿದೆ ನಿನ್ನ ಉಸಿರನು!!

- ಪಿ.ಜಿ.ಜ್ಯೋತಿ

09 Aug 2017, 08:50 am
Download App from Playstore: