ಎಲೆ ಮಾನವ

ಕಲ್ಲಾದವನ ಮನವನು ಕರಗಿಸಿ
ಹೂವಾಗಿಸುವ ಬಗೆ ನೀ ತಿಳಿಸು!!
ಹೇಗಾದರೂ ನಾ ಕಲ್ಲನು‌ ಕರಗಿಸಿ
ವಲಿಸಿಕೊಳ್ಳುವ ಬಗೆ ನೀ ತಿಳಿಸು!!

ಎಲೆ ಮಾನವ ಈ ಮನವಿ ಸತ್ಯವು
ನಿನಗಾಗಿ ಕಾದು ಕುಳಿತ ಕ್ಷಣ ನಿತ್ಯವು!!

ಭಾರವಾದ ನನ್ನ ಈ ಮನಸಿನ್ನು
ಹಗುರಾಗಿಸುವ ಬಗೆ ನೀ ತಿಳಿಸು!!
ನೋವ ನುಂಗಿ ಸುಖವ ಹಂಚಿ
ನಯವಾಗಿಸುವ ಬಗೆ ನೀ ತಿಳಿಸು!!

ಎಲೆ ಮಾನವ ಈ ಮನವಿ ಸತ್ಯವು
ನಿನಗಾಗಿ ಕಾದು ಕುಳಿತ ಕ್ಷಣ ನಿತ್ಯವು!!

ಅವನ ಉಸಿರಿನಲ್ಲಿ ನನ್ನ ಉಸಿರನ್ನು
ಬೆರೆಸಿ ನಲಿವ ಬಗೆ ನೀ ತಿಳಿಸು!!
ಉಸಿರು ‌ನಿಲ್ಲುವ ಮೊದಲು ಅವನನ್ನು
ವಲಿಸಿಕೊಳ್ಳುವ ಬಗೆ ನೀ ತಿಳಿಸು!!

ಎಲೆ‌ ಮಾನವ ಈ ಮನವಿ ಸತ್ಯವು
ನಿನಗಾಗಿ ಕಾದು ಕುಳಿತ ಕ್ಷಣ ನಿತ್ಯವು!!

- ಪಿ.ಜಿ.ಜ್ಯೋತಿ

09 Aug 2017, 08:51 am
Download App from Playstore: