ಅಡವಿಯಲಿ ಮೈ ಗೊಡವಿ
ಅಡವಿಯಲಿ ಮೈ ಗೊಡವಿ
ಕಳೆದುಕೊಂಡೆನು ಮನಸ!!
ಹುಡುಕಿದರೂ ಹಿಂತಿರುಗಿ
ಸಿಗುವುದು ಕನಸೇ!!
ಕಡು ರಾತ್ರಿ ಕಾಡಿನಲ್ಲಿ
ಕಾಡ ಮೃಗಗಳ ಬೇಟಿ!!
ಹೆದರಿದರೂ ಹಿಂತಿರುಗಿ
ಬಂದದ್ದು ನಿಜವೇ!!
ನಡು ನೀರಿನಲಿ ಕೈ ತೊಳೆದು
ಅಳಿಸಿದೆನು ನೆನಪುಗಳ!!
ನೆನೆದರೂ ಮರುಕವೇ
ಮರಳದಿರಲಿ ಆ ನೆನಪು!!
ಹೊಸತಾಗಿ ಕಟ್ಟಿದೆನು
ಅರಮನೆಯ ಹೃದಯದಲಿ!!
ಆಳುವವರು ಬಲ್ಲರೇ
ನನ್ನೆದೆಯ ನೋವ!!
ಕೈ ಹಿಡಿದು ನಡೆಸುವವರು
ಯಾರಿಹರು ಜೊತೆಯಲ್ಲಿ!!
ನನಗಾಗಿ ನಾನೊಂದೇ
ಎನ್ನುವುದೇ ಸತ್ಯ!!
- ಪಿ.ಜಿ.ಜ್ಯೋತಿ
09 Aug 2017, 05:34 pm
Download App from Playstore: