ಅವಳ ಅಂದ ಚಂದ
ಗಂಧರ್ವ ಲೋಕದಿಂದ
ಬಂದವಳ ಅಂದ ಚಂದ!!
ಆ ಸೂರ್ಯಕಾಂತಿಯಂತೆ
ಅರಳಿರುವ ಮೊಗವು ಚಂದ!!
ಅವನಿಯಲ್ಲಿ ಹೊಂಗಿರಣ ಚಲ್ಲಿ
ನಸು ನಗುವ ಕಳೆಯು ಚಂದ!!
ಹೂ ಬಾಣ ಹೂಡಿ ನನ್ನೆಡೆಗೆ ಬಿಟ್ಟು
ನನ್ನ ಮನ ಸೆಳೆದ ಪರಿ ಚಂದ!!
ತುಸು ದೂರ ನಿಂತು ಬರ ಸೆಳೆದು
ನನ್ನ ಕಾಡಿರುವ ಬಗೆ ಚಂದ!!
ಖುಷಿಯಿಂದ ನಾ ಅವಳ ವರಿಸಿ
ಅವರೊಡನೆ ಬೆರೆತ ಕ್ಷಣ ಚಂದ!!
ತಡ ರಾತ್ರಿಯಲ್ಲಿ ನನ್ನ ನಿದ್ದೆಯಲ್ಲಿ
ಜೊತೆಯಾಗಿ ಬಂದವಳು ಚಂದ!!
ಅವಳ ರಮಿಸಿ ಎದ್ದಾಗ ನೆನಪು
ನಾ ಕಂಡ ಅವಳ ಕನಸದು ಚಂದ!!
- ಪಿ.ಜಿ.ಜ್ಯೋತಿ
09 Aug 2017, 08:21 pm
Download App from Playstore: