ಸ್ವಾತಂತ್ರ್ಯ ಭಾರತ
ಭಾರತ2 ಇದು ನಮ್ಮ ಭಾರತ ಸ್ವಾತಂತ್ರ್ಯ ಭಾರತ|
ವೀರಧೀರಾಳಿದ ಭಾರತ ಸ್ವಾತಂತ್ರ್ಯ ಭಾರತ||ಪ||
ಬಾಪೂಜಿ,ನೇತಾಜಿ ಬೆಳಗಿದ ಭಾರತ|
ನೆಹರು,ಅಂಬೇಡ್ಕರ್ ಬೆಳಸಿದ ಭಾರತ||
ವಿಶ್ವೇಶ್ವರಯ್ಯ,ರಾಧಾಕೃಷ್ಣನ್ ನಿರ್ಮಿಸಿದ ಭಾರತ|
ವಿವೇಕಾನಂದ, ಅಬ್ದುಲ್ ಕಲಾಂರ ಕನಸ್ಸಿನ ಭಾರತ||
ಇದೇ ಸ್ವಾತಂತ್ರ್ಯ ಭಾರತ ಇದೇ ನಮ್ಮ ಭಾರತ||೧||
ಭಗತ್ ಸಿಂಗ್,ಆಜಾದ್ ಉಸಿರುಕೊಟ್ಟ ಭಾರತ|
ರಾಜಾದಿರಾಜ ಭರತನು ಹೆಸರುಕೊಟ್ಟ ಭಾರತ||
ಸುಲ್ತಾನ,ರಜಪೂತರು ಆಳಿದ ಭಾರತ|
ಸರ್ವ ಜಾತಿ-ಧರ್ಮಗಳು ಬಾಳಿದ ಭಾರತ||
ಇದೇ ಸ್ವಾತಂತ್ರ್ಯ ಭಾರತ ಇದೇ ನಮ್ಮ ಭಾರತ||೨||
ದೇಶಭಕ್ತರ ರಕ್ತ ಕಣಕಣ ಚೆಲ್ಲಿ ಪಡೆದ ಸ್ವಾತಂತ್ರ್ಯ ಭಾರತ|
ಪಾಶ್ಚಿಮಾತ್ಯರನ್ನು ಹೊರಗಟ್ಟಿ ಮೆಟ್ಟಿನಿಂತ ಭಾರತ||
ನಮ್ಮೆಲ್ಲರಿಗೂ ನೆಮ್ಮದಿಯ ಬದುಕುಕೊಟ್ಟ ಭಾರತ|
ವಿಶ್ವವೇ ತಲೆಬಾಗಿ ವಂದಿಸುವ ಪುಣ್ಯಭೂಮಿ ಭಾರತ||
ಇದೇ ಸ್ವಾತಂತ್ರ್ಯ ಭಾರತ ಇದೇ ನಮ್ಮ ಭಾರತ||೩||
- ಕೆ.ಕೆ.ನಂದಾದೀಪ್(ಕೋಲಾರದ ಕಂದ)
10 Aug 2017, 06:54 am
Download App from Playstore: