ಹೇಗೆ ಸೇರಲಿ
ಮಿನುಗುವ ತಾರೆಯ
ಹೋಲಿಕೆಯು ಅವನಿಗೆ!!
ಮಿನುಗಿ ಮರೆಯಾಗುವ
ಮಾಯೆಯಂತೆ ಅವನು!!
ಸನಿಹ ಕಂಡರೂ ದೂರ
ಎನಿಸುವ ಕಾಂತಿ ಅವನದು!!
ದೂರ ಇದ್ದರೂ ಹೊಳೆದು
ಮನಸೆಳೆವ ಗೀಳು ಅವನಿಗೆ!!
ವಿರಹದ ಜಾಡು ಹಿಡಿದು
ಕಾಡಿಸುತ್ತಿರುವ ನನ್ನ ಅವನ!!
ಕಂಡೂ ಕಾಣದಂತೆ ನಟಿಸುವ
ನಾಟಕದ ಪಾತ್ರಧಾರಿ ಅವನು!!
ಸೇರದಾದೆ ಅವನ ನಾನು
ಬಾರದಾದ ಇಲ್ಲಿ ಅವನು!!
ಅವನ ಮೇಲೆ ಮೋಹ ನನಗೆ
ಸೇರಲಿ ಹೇಗೆ ನಾನು ಅವನ!!
- ಪಿ.ಜಿ.ಜ್ಯೋತಿ
10 Aug 2017, 08:43 am
Download App from Playstore: