ನನ್ನ ಕಣ್ಣುಗಳಿಗೆ ಹಬ್ಬ

ಅವಳ ನೋಡಿದ ಖುಷಿಯಲಿ ಇಂದು
ನನ್ನ ಕಣ್ಣುಗಳಿಗೆ ಹಬ್ಬದ ಸಂಭ್ರಮ!!
ಅವಳ ವಯ್ಯಾರದ ರಸದೌತಣ ಉಂಡು
ನನ್ನ ಕಣ್ಣುಗಳು ಹಿಗ್ಗಿ ಬೀಗುತ್ತಿವೆ!!

ಆ ಅಪೂರ್ವ ಗೊಂಬೆಯನ್ನು ತಿದ್ದಿ ತೀಡಿದ
ಆ ಸೃಷ್ಟಿಕರ್ತನಿಗೆ ನನ್ನದೊಂದು ನಮನ!!
ಎಷ್ಟೇ ತಡೆದರೂ ಅವಳನ್ನು ಮತ್ತೆ ಮತ್ತೆ
ನೋಡುವ ಬಯಕೆ ನನ್ನ ಕಣ್ಣುಗಳಿಗೆ!!

ಎದುರಲ್ಲಿಯೇ ಇದ್ದರೂ ಅವಳನ್ನು
ಕದ್ದು ಕದ್ದು ನೋಡುವ ಚಟ ನನ್ನ ಕಣ್ಣುಗಳಿಗೆ!!
ಹೇಗಾದರೂ ಮಾಡಿ ಅವಳನ್ನು ನ‌ನ್ನ ಕಣ್ಣಲ್ಲೇ
ಸೆರೆ ಹಿಡಿದಿಟ್ಟುಕೊಳ್ಳುವ‌ ಬಯಕೆ ನನ್ನದು!!

- ಪಿ.ಜಿ.ಜ್ಯೋತಿ

10 Aug 2017, 02:59 pm
Download App from Playstore: