ಕೊನೆಯ ಕವನ

ನಿನಗಾಗಿ ಕಾದೆ  ಬರದೇನೆ ಹೋದೆ
ಪ್ರೀತಿಗಾಗಿ ಕಾದೆ ಸಿಗದೇನೆ ಹೋದೆ
ನಿನ್ನ ಹೆಸರ ಹಿಂದೆ ನನ್ನ ಹೆಸರ ಬರೆದೆ
ನೀ ದೂರ ಹೋದೆ ನನ್ನ ಬಿಟ್ಟು ಹಿಂದೆ
ಆಸೆಗಳ ಬುಟ್ಟಿ ನಾ ದಿನವು ಕಟ್ಟಿ
ಮನದಲ್ಲಿ ನಾನು ಪೂಜಿಸಿದೆ ನಿನ್ನ
ನಿನ್ನಿಂದ ತೂತಾದ ಹೃದಯವನು ನೆಚ್ಚಿ
ಇನ್ಯಾರ ಪ್ರೀತಿ ನಾ ಮಾಡ್ಲಿ ಚಿನ್ನ
ನಾ ದಿನವು ಕಾದದ್ದು ಬರಿ ಒಂದು ಕನಸೇ
ನಿನಗಾಗಿ ಕಾದಿದ್ದ ನೆನಪುಗಳು ಸೊಗಸೆ
ನೆನಪನ್ನು ನೆನಪಿಸುತ ನೆಪವಾಯ್ತು ಜೀವನ
ನನ್ನ ಕಣ್ಣೀರಿನ ನೋವಿಗೆ ನೀನಾದೆ ಕಾರಣ
ನನದೊಂದೇ ಆಶಯ ನೀನೆಲ್ಲೆ ಹೋದರೂ
ಯಾರೊಂದಿಗಿದ್ದರು ಸುಖವಾಗಿರು
ಕೊನೆಯಾಗಿದೆ ಇಂದು ನನ್ನ ಪ್ರೀತಿ ಕಥನ
ಇದೋ ಈ ಕವನಕೆ ಕಣ್ಣೀರಿನ ವಿರಾಮ...

-ಅರೆಯೂರು ಚಿ.ಸುರೇಶ್

- ಅರೆಯೂರು ಚಿ. ಸುರೇಶ್

10 Aug 2017, 10:15 pm
Download App from Playstore: