ನೀ ಬಾ...

ಏಕಾಂತ ತುಂಬಿದ ಈ ಬದುಕಿನಲ್ಲಿ
ಬಲಗಾಲಿಟ್ಟು ನೀ ಒಳಗೆ ಬಾ!!
ಮಂದಮತಿಯಾದ ಈ ಮನಸಿನಲ್ಲಿ
ಮಂದಹಾಸ ನೀ ತುಂಬು ಬಾ!!

ಇರುಳಿನಲ್ಲಿ ಕಂಗೆಟ್ಟು ನಾ ನಿಂತಾಗ
ಭರವಸೆಯ ಬೆಳಕಾಗಿ ನೀ ಬಳಿಗೆ ಬಾ!!
ಮರಳು ಗಾಡಿನಲ್ಲಿ ಅಲೆಯುತ್ತಿರುವಾಗ
ಕೈ ಹಿಡಿದು ನೀ ದಾರಿ ತೋರು ಬಾ!!

ಭಾವನೆಗಳನ್ನೇ ಮರೆತು ಕುಳಿತ
ಮನಸಿಗೆ ನೀ ಕನ್ನಡಿ ಹಿಡಿಯ ಬಾ!!
ಅರ್ಥವಿಲ್ಲದ ಈ ಬದುಕನು ಅರ್ಥೈಸುವ
ಮುನ್ನುಡಿ ನೀ ಆಗು ಬಾ!!

- ಪಿ.ಜಿ.ಜ್ಯೋತಿ

11 Aug 2017, 10:59 am
Download App from Playstore: