ಬಂಜೆ ಎನ್ನುವ ಪಟ್ಟ
ತಾಯ ಮಮತೆ ನನ್ನಲ್ಲಿ ಇದ್ದರೂ
ನಾ ಕಂದನ ಮುದ್ದಿಸಲಿಲ್ಲ!!
ಮುದ್ದಿಸುವ ಮನಸಿದ್ದರೂ
ನನ್ನ ಮಡಿಲಲ್ಲಿ ಕಂದನಿಲ್ಲ!!
ಕಂದನ ಹೆರುವ ಬಯಕೆ ಇದ್ದರೂ
ಆ ಯೋಗ್ಯತೆ ನನಗೆ ಇಲ್ಲ!!
ನನ್ನ ಬಂಜೆ ಎನ್ನುವರು ಎಲ್ಲ
ಪುಟ್ಟ ಮಕ್ಕಳಿಂದ ದೂರ ಇರಿಸಿದರಲ್ಲ!!
ಮಡಿಲಲ್ಲಿ ನಗುವ ಕಂದನ ಬಯಸಿ
ಮನಸು ಹಂಬಲಿಸುತ್ತಿದೆ!!
ಈ ತಾಯ ಮಮತೆಯ ವೇದನೆ
ಯಾರಿಗೂ ಹೇಳ ತೀರದು!!
ಮಕ್ಕಳಿಲ್ಲವೆಂದು ನನ್ನ ಪ್ರೀತಿಯ ಪತಿ
ನನ್ನ ತೊರೆದು ಹೋದನಲ್ಲ!!
ಗಂಡನ ಬಿಟ್ಟವಳು ಎಂದು
ನನ್ನ ಹೆತ್ತವರು ನನ್ನ ದೂರಿದರಲ್ಲ!!
ಒಡ ಹುಟ್ಟಿದವರಿಗೂ ನನ್ನ
ಒಡಲಿನ ವೇದನೆ ಅರ್ಥವಾಗಲಿಲ್ಲ!!
ಬಂಜೆ ಎನ್ನುವ ಪಟ್ಟ ಹೊತ್ತು
ನಾ ಬದುಕ ಸಾಗಿಸುತ್ತ ಇರುವೆನು!!
- ಪಿ.ಜಿ.ಜ್ಯೋತಿ
11 Aug 2017, 11:24 am
Download App from Playstore: