ಕಣ್ಣ ಹನಿಗಳ ಸ್ಥಾಪನೆ
ನನ್ನ ಕಣ್ಣಿನಲ್ಲಿ ಕನಸುಗಳ
ಸ್ಥಾಪನೆ ಮಾಡ ಬಂದ ಅವನು
ಕನಸುಗಳ ಜೊತೆ ಕಣ್ಣೀರನ್ನೂ
ಸ್ಥಾಪಿಸಿ ಬಿಟ್ಟನು!!
ಕಣ್ಣಿನಲ್ಲಿ ಜೋಪಾನವಾಗಿ
ಕಾದಿದ್ದರೂ ನಾನು ಅವನನ್ನು
ಅಲ್ಲಿಂದ ದೂರ ಹೋಗುವ
ಬಯಕೆ ಅವನಿಗೆ!!
ಎಷ್ಟೇ ತಡೆದರೂ ನಿಲ್ಲದೇ
ಕಣ್ಣ ಹನಿಗಳ ಜೊತೆಗೂಡಿ
ಮೆಲ್ಲನೆ ಹೆಜ್ಜೆ ಇಟ್ಟು ಸದ್ದಿಲ್ಲದೇ
ನುಸುಳಿ ಹೋಗುತ್ತರುವ!!
ನನ್ನ ಕಣ್ಣಿನಲ್ಲಿ ಕಣ್ಣೀರನ್ನು
ಸ್ಥಾಪನೆ ಮಾಡಿದ ಅವನಿಗೆ
ಸಲ್ಲಿಸುತ್ತಿರುವೆ ನೊಂದು
ನಾ ಕಣ್ಣೀರಿನ ಅಭಿಷೇಕ!!
- ಪಿ.ಜಿ.ಜ್ಯೋತಿ
14 Aug 2017, 11:53 am
Download App from Playstore: