ಮೈ ಮರೆವೆ

ಸಾಗರಕೂ ಸಂಭ್ರಮವು
ನಿನ್ನ‌ ಒಲವ ನದಿಯ ಸಂಗಮವು!!
ಅಲೆ‌ ಅಲೆಯಾಗಿ ಸಂಭ್ರಮಿಸಿದೆ‌ ಒಲವು
ದಡ ಬಡಿಯುತಲಿ ಪ್ರತಿ ಕ್ಷಣವೂ!!

ಮಾಮರಗಳಿಗೂ ಸಂತಸವು
ಕೋಗಿಲೆ ಧನಿಯಲಿ‌ ನೀನಿರಲು!!
ಹಾಡಲು ಹಾಡ ಮನದುಂಬಿ
ಚಿಗುರೆಲೆಗಳು‌ ನಲಿವುದು ಮೈದುಂಬಿ!!

ತನು ಮನಗಳಿಗೂ ಆನಂದ
ನಾ ಕಾಣಲು ನಿನ್ನಯ ಈ ಅಂದ!!
ಕಾದಿದೆ ಹೃದಯವು ನಿನ್ನ ಬರುವ
ನೀ ಸೇರಲು ‌ನ‌‌ನ್ನ ನಾ ಮೈ ಮರೆವೆ!!

- ಪಿ.ಜಿ.ಜ್ಯೋತಿ

14 Aug 2017, 11:54 am
Download App from Playstore: