ಒಂದೇ ಮಾತರಂ
ಒಗ್ಗೂಡಿ ಬಾಳೋಣ ಈ ತಾಯಿಯ ಮಡಿಲಲ್ಲಿ
ಕ್ಷಣ ಕ್ಷಣವೂ ಸ್ಮರಿಸೋಣ ಸ್ವಾತಂತ್ರ್ಯದ ಸಾಧನೆಯನ್ನು ಸಾಧಕರ ಪ್ರಾಣತ್ಯಾಗವನ್ನೂ...........
ಹಸಿರುತುಂಬಿದ ಸ್ವಛಂದ ಹೂದೋಟವಿದು ಬಿಳುಪಲ್ಲಿನ ಶಾಂತಿಯ ಸಾಮ್ರಾಜ್ಯವಿದು ಕಣ ಕಣದೊಳು ಉಕ್ಕಿ ಹರಿಯುತ್ತಿರುವ ಭಾರತೀಯ ರಕ್ತದವಿದು..............
ನನ್ನ ದೇಶ ನನ್ನ ರಾಜ್ಯ ನನ್ನ ಭೂಮಿ ನನ್ನ ತಾಯಿ ಭಾರತಿ ಜನಜನಿತ ಸಂಸ್ಕೃತಿ ಸಾಧ ನಿನ್ನ ಪಾದಗಳಿಗೆ ಹೃದಯ ಪುಷ್ಪ ಅರ್ಪಣೆ ಮನದಲ್ಲಿನ ಗೌರವದ ಅರ್ಚನೆ...........
ಕಾಶ್ಮೀರದ ಹಿಮವು ನೀನು, ಕನ್ಯಾಕುಮಾರಿಯ ಜಲರಾಶಿ ನೀನು, ಮರುಭೂಮಿ ನೀನು, ಪರ್ವತಗಳು ನೀನು ಭಾರತಿ ನನ್ನ ಜನನಿ ಬಹುರೂಪಿನಿ ಸೃಷ್ಟಿಯ ಸಾಮ್ರಾಗ್ನಿ................
ನಿನ್ನಲ್ಲಿ ನೆಲೆಯಿದ್ದ ಪರಕೀಯರಿಗೂ ನೆಲೆ ಕೊಟ್ಟ ಕರುಣಾಮಯಿ ಕಾವೇರಿ ಪ್ರವಿತ್ರತೆಯ ತುಂಗಾ ಪಾಪ ಕಳೆಯುವ ಗಂಗಾ.............
ನೊಂದ ನಿನ್ನ ಮಕ್ಕಳ ನೋವನುಂಡ ಮನವ ನೋಡಿ ಕಣ್ಣೀರಿಡುವೆ
ಧರಣಿ ನಮ್ಮೆಲ್ಲರ ಸಲಹುವ ದಾಕ್ಷಾಯಿಣಿ..............
ಮಳೆ ನಿನ್ನಲ್ಲಿ ಬೆಳೆ ನಿನ್ನಲ್ಲಿ ಕಾಡು ನಿನ್ನಲ್ಲಿ ಕನಸು ನಿನ್ನಲ್ಲಿ ನನಸು ನಿನ್ನಲ್ಲಿ ಜನನ ನಿನ್ನಲ್ಲಿ ಮರಣ ನಿನ್ನಲ್ಲಿ ನಾನೆಂದು ನಿನ್ನಲ್ಲೇ ಭಾರತಿ ಬದುಕಿನರ್ಥ ತಿಳಿಸಿಕೊಟ್ಟ ಭಗವತಿ............
ಒಂದೇ ಮಾತರಂ ಎಂದು ನನ್ನ ಮುಂದೆ ಸಾಗೋಣ ಕಷ್ಟಗಳಲ್ಲಿ ಕೈಜೋಡಿಸಿ ನಗುವಿನೆಡೆಗೆ ನಾವು ನಾಡಿಯೋಣ ಹಿಂದೆ ನಡಿದ ವಿರ ಯೋಧರ ಹೋರಾಟ ನಾವು ನೆನೆಯೋಣ ಮುಂದಿರುವ ಭವಿಷ್ಯವನ್ನು ನಮ್ಮಿಂದ ಉಜ್ವಲಗೊಳಿಸೋಣ..............
ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು..................
- ಚುಕ್ಕಿ
15 Aug 2017, 09:19 am
Download App from Playstore: