ಮೂರು ಬಣ್ಣ

ಮೂರು ಬಣ್ಣದಲ್ಲಿ ಇರುವ
ನೂರು ಶಕ್ತಿ ನಮ್ಮದು
ನಡುವೆ ಇರುವ ಚಕ್ರದಲ್ಲಿ
ನಮ್ಮ ಯುಕ್ತಿ ಅಡಗಿದೆ!!

ದೇಶಕ್ಕಾಗಿ ಪ್ರಾಣ ಕೊಟ್ಟ
ವೀರ ಜನತೆ ನಮ್ಮದು!!
ಅವರ ದಾರಿಯಲ್ಲಿ ದೊರೆತ
ಸ್ವಾತಂತ್ರ್ಯ ಎಂದೂ ನಮ್ಮದು!!

ಒಳಿತಿನಲ್ಲಿ ಪ್ರೇಮ ಇಟ್ಟು
ಧರ್ಮದಲ್ಲಿ ಬೇಧ ಬಿಟ್ಟು
ಕಿರ್ತಿ ಧ್ವಜವ ಹಿಡಿದು ನಾವು
ಸಾಗುವ ಮುಂದೆ ಸಾಗುವ!!

ನಾ ಕಂಡ ದೇಶ ಈ ನನ್ನ
ಭಾರತಕ್ಕೆ ಇಲ್ಲ ಸಾಟಿಯು
ಓ ದೇಶ ಪ್ರೀಮಿ ನೀನು
ಹಂಚ ಬಾರೋ ದೇಶ ಪ್ರೇಮವ!!

ಖಡ್ಗದಲ್ಲಿ ಶಾಂತಿ ಸಾರಿ
ಶಾಂತಿಯಿಂದ ಕ್ರಾಂತಿ ಅಳಿಸಿ
ಪ್ರೀತಿಯಿಂದ ಸಹಬಾಳ್ವೆಯಿಂದ
ಬಾಳುವ ನಾವು ಬಾಳುವ!!

ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ
ಶುಭಾಶಯಗಳು.........

- ಪಿ.ಜಿ.ಜ್ಯೋತಿ

15 Aug 2017, 11:08 am
Download App from Playstore: