ಗೆಲುವು

ಹಂಚು ಬಾ ಗೆಳೆಯ
ನೀ ಸ್ವತಂತ್ರ್ಯದ ಸಿಹಿಯ!!
ಬೆಳಗ ಬಾ ಗೆಳೆಯ
ಈ ಸ್ವಾತಂತ್ರ್ಯದ ಗೆಲುವ!!

ದೇಶ ಪ್ರೇಮಿ ಪ್ರಾಣ ಕೊಟ್ಟು
ಉಳಿಸಿಕೊಟ್ಟ ನಾಡಿದು!!
ಸ್ಮರಿಸಬೇಕು ನಾವು ಎಂದೂ
ಅವರ ತ್ಯಾಗದ ಗೆಲುವನು!!

ದುಷ್ಟತನದಿ ಅಳಿಸಬೇಡ
ಉಳಿಸು ನಿನ್ನಯ ನಾಡನು!!
ಸ್ವಾರ್ಥ ಬಿಟ್ಟು ಸಾಗು ಮುಂದೆ
ಗೆಲುವು ನಿನ್ನನು ಕಾದಿದೆ!!

- ಪಿ.ಜಿ.ಜ್ಯೋತಿ

15 Aug 2017, 11:19 am
Download App from Playstore: