ಮಮತೆಯ ಮಾತೆಗೆ ಜನ್ಮದಿನದ ಶುಭಾಶಯಗಳು....

ಸ್ವರ್ಗದ ಸಾಮ್ರಾಜ್ಯದ
ಹೊನ್ನಿನ ಸಿಂಹಾಸನದ
ಹಚ್ಚನೆಯ ಸ್ವಚ್ಚದ
ವಸ್ತ್ರಧಾರಿಣಿ ನೀನಂದು.....

ನಿನ್ನ ವೈಭವಭರಿತ ದೇಗುಲದತ್ತ
ನೈರುತ್ಯ ಅನ್ವೇಷಣೆಗಳ ಮಾರುತ
ನುಗ್ಗಿಬಂದರು ಪೋರ್ಚುಗೀಸರಂದು
ವಾಸ್ಕೋಡಿಗಾಮನೆ ಮುಂದು......

ಗಾಮನ ಬೆನ್ನಟ್ಟಿ ಬಂದವರು
ಹಲವರು........
ಠಕ್ಕುಕಾರರಾಗಿ ಉಳಿದವರು
ಬಿಳಿಯರು.........

ಮಡಿಲಲ್ಲಿ ಮಕ್ಕಳಾಗಿ
ಬೆಳೆದರು ಹುಲುಸಾಗಿ
ಮನೆಯ ವಿಘಟಿಸುತ್ತ
ಮೆರೆದರು ನಿನ್ನ ತುಳಿಯುತ್ತ.....

ನೆರಳು ನೀಡಿದ ಮರದ
ಮೂಲೋಚ್ಚಾಟನೆ ಮಾಡುತ
ಮುನ್ನೂರು ವರ್ಷ ಮೆರೆದ
ಆಂಗ್ಲರು ನಮ್ಮ ತುಳಿಯುತ.....

ನಿನ್ನ ದಾಸ್ಯ ವಿಮೋಚನೆಗಾಗಿ
ಕರುಳ-ಕುಡಿಗಳು ಬಲಿಯಾಗಿ
ತಂದರು ಸ್ವತಂತ್ರ ನಮಗಾಗಿ
ಕಾಯುತಿರುವೆವು ಸಾರ್ಥಕತೆಗಾಗಿ.....

ನಿನ್ನ ಮಮತೆಯ ಕುಡಿಗಳೆ
ನಿನಗೆ ವೈರಿಗಳಾಗಿ ಬೆಳೆ
ವೈಷಮ್ಯದಿ ತುಂಬಿದೆ ಇಳೆ
ಎಲ್ಲೆಲ್ಲು ಸ್ವಾರ್ಥದ ಕೊಳೆ......

ಅಮ್ಮ ನೀ ಬಾಳು ನೂರುಕಾಲ
ಮುತ್ತೈದೆಯಾಗಿ ಸದಾಕಾಲ
ಹರಸು ನಿನ್ನ ಮಕ್ಕಳ
ಉಳಿಸು ಒಳ್ಳೆತನಗಳ.......

ಎಪ್ಪತ್ತೊಂದೆಯ ವಸಂತದ ಶುಭಾಶಯಗಳು



ಶಾರಧ

- ಶಕುಂತಲಾ

16 Aug 2017, 01:53 pm
Download App from Playstore: