ಮಗಳೇ
ಕಂದ ನಿನ್ನ ನೆನಪಲ್ಲಿ
ನನ್ನ ಪೂರ್ತಿ ಜೀವನ ಕಳೆಯಲಿ..........
ಮುದ್ದು ಮುಖದ ಗಂಧದ
ಗೊಂಬೆ ನೀನು ಕಿರುನಗೆಯ ಕಿನ್ನರಿ
ತೊದಲು ಮಾತನಾಡುವ ಬಂಗಾರಿ.........
ಕಾಲ್ಗೆಜ್ಜೆ ಸದ್ದು ಕದ್ದು ಕದ್ದು ನಿನ್ನ
ಪುಟ್ಟ ಪುಟ್ಟ ಪಾದಗಳನ್ನು ಮುದ್ದಾಡುತ್ತಿದೆ
ನನ್ನ ಕಣ್ಣು ಮುಚ್ಚಿ ಮಗಳೇ.............
ನವ ಮಾಸಗಳೊತ್ತರೇನು
ಮಲ್ಲಿಗೆಯಂತೆ ಮೃದು ನೀನು
ಈ ಅಮ್ಮನಿಗೆ ಮರು ಜನ್ಮ ಕೊಟ್ಟ
ತಾಯಿ ನೀನು..............
ಅಳುತ ನೀನು ನಗುತ ನೀನು
ನನ್ನ ಗಮನವ ಸೆಳೆಯುವೆ ಪುಟ್ಟ
ಕಡೆವೆರೆಗೂ ನಿನ್ನೊಡನೆ ನಾನಿಲ್ಲದಿದ್ದರು
ನನ್ನುಸಿರ ಹೆಸರು ಬೆರೆಸಿಕೊಡುವೆ ಗಾಳಿಗೆ ನೀನಿರುವವರೆಗೂ ನನ್ನ ಮಗಳ ಕಾಯೆ ಗಾಳಿ ಎಂದು..................
ನಿನ್ನ ಆದಿಯಲ್ಲಿಂದ ಮುಳ್ಳುಗಳೆಲ್ಲಾ ನನ್ನ ಕಣ್ಣೀರ ಹನಿಗಳಾಗಿ ನೆಲ ಸೇರಲಿ ನಿನ್ನ ಪ್ರತಿ ಹೆಜ್ಜೆಗೆ ದುಂಬಿಮುಟ್ಟದ ಹೂವಾಗಿ ಮಗಳೇ......
ಮಾನ್ವಿತಾ ಎಲ್ಲರ ಮನದಲ್ಲಿ
ಅರಳಿದ ಮೊಗ್ಗಾಗಿ ನಿ ಬಾಳು ನಿನ್ನ ನೆನೆದ ಕ್ಷಣಮಾತ್ರದಲ್ಲಿ ಮಂದಹಾಸದ ಸವಿಯಾಗಿ ನೀ ಸೇರು ನನ್ನಲ್ಲಿ ನೀನಿರುವ ನನ್ನ ಹೃದಯದಲ್ಲಿ............
- ಚುಕ್ಕಿ
16 Aug 2017, 04:43 pm
Download App from Playstore: