ಆ ಕಿರು ನಗೆ
ನೀ ಪರಿಚಯಿಸಿದ ಆ ಕಿರು ನಗೆಯು
ಅಪಹರಿಸಿತೇ ನನ್ನ ಈ ಹೃದಯವನ್ನ!!
ನಾ ಪರಿಚಯಿಸಿದ ಈ ನನ್ನ ಮನವು
ಸ್ವಾಗತಿಸಿ ಕಾದಿದೆ ನಿನ್ನ ಆಗಮನವನ್ನ!!
ನಿನ್ನ ಪ್ರೀತಿಯ ಅಲಂಕಾರದ ಕೈಗನ್ನಡಿ
ತೋರು ಬಾ ನೀ ಈ ಸವಿ ಬದುಕಿಗೆ!!
ನಾನು ಇಡುವ ಪ್ರತಿ ಹೆಜ್ಜೆಗೂ
ಜೊತೆಯಾಗಿ ಬಾ ನೀ ಅಳಿಸದೇ!!
ಹೊಸ ಹುರುಪಿನ ಸಂತಸವ ನೀನು
ಮೀಟಿ ನುಡಿಸಿದೆ ನನ್ನ ಎದೆಯೊಳಗೆ!!
ಮರೆಯಾಗಿ ಹೋಗದಂತ ಸಂಗತಿಯ
ಆಣತಿಯು ನೀನು ಈ ನನ್ನ ಬದುಕಿಗೆ!!
- ಪಿ.ಜಿ.ಜ್ಯೋತಿ
16 Aug 2017, 05:24 pm
Download App from Playstore: