ಸೂರ್ಯ ನಲಿದು ಬರಲು
ಕತ್ತಲು ಮೆಲ್ಲ ಸರಿಯುತಿದೆ
ಬೆಳಕು ಎಲ್ಲೆಡೆ ಪಸರಿಸುತಿದೆ
ಹಕ್ಕಿಯ ಗಾನವು ಸ್ವಾಗತ ಕೋರಿ
ಮೂಡಣದಿ ಉಷೆಯ ಕರೆಯಿತು
ಹೊನ್ನತೇರಿನಲಿ ರಾಜ ಗಾಂಭೀರ್ಯದಲಿ
ರವಿ ತೇಲಿಬಂದ ಆಗಸದಲ್ಲಿ
ಜಗವೆಲ್ಲ ಝಘಮಗಘಿಸಿತು
ಬೆಳ್ಳಂಬೆಳಕು ಈಗಾಯ್ತು
ಬಿರಿದ ಮೊಗ್ಗು ದಳ ಬಿಚ್ಚಿ
ದುಂಬಿ ಮಧುಹೀರಿತು ಝೇಂಕರಿಸಿ
ಬೀಸೋ ತಂಗಾಳಿ ಚಾಮರ ಬೀಸಿ
ಮೆಲ್ಲ ಜಗದ ತಲೆ ನೇವರಿಸಿತು
ಸಾಗರದ ನೀರಿಗೆ ಹೊಂಬಣ್ಣ ಚೆಲ್ಲಿ
ಎಲೆಯ ಮೇಲೆಲ್ಲಾ ಇಬ್ಬನಿ ಹರಡಿ
ಹರಿವ ನೀರಿನ ನಿನಾದಕೆ ಮರುಳಾಗಿ
ಸೂರ್ಯ ನಲಿದು ಬರಲು ಹಗಲಾಯ್ತು
ನಿಸರ್ಗದ ಈ ವಿದ್ಯಮಾನ
ಕವಿಗಾಯಿತು ಚೇತನ
ಕಲ್ಪನೆಯ ಕೂಸು ಹಡೆದವನ
ಬರಹದಲ್ಲಿ ಸುಂದರ ಕವನ ಜನಿಸಿತು
0537ಎಎಂ17082017
*ಅಮುಭಾವಜೀವಿ*
- ಅಮುಭಾವಜೀವಿ (ಅಪ್ಪಾಜಿ ಎ ಮುಸ್ಟೂರು )
17 Aug 2017, 05:58 am
Download App from Playstore: