ಗಲ್ಲದ ಮೇಲಿ‌ನ ಕಪ್ಪು ಮಚ್ಚೆ

ಬೆಳ್ಳಗಿನ ಮೊಗದಲ್ಲೊಂದು
ಗಲ್ಲದ ಮೇಲಿನ ಕಪ್ಪು ಮಚ್ಚೆ!!
ಹುಣ್ಣಿಮೆಯ ಚಂದಿರನಿಗೆ
ದೃಷ್ಟಿಯ ಬೊಟ್ಟು ಇಟ್ಟಂತೆ!!

ವಿಪರೀತವಾದ ಆ ಸೌಂದರ್ಯ
ಅಪರೂಪದ ಸೃಷ್ಟಿಯ ವೈಭವ!!
ಮೊಗದಲ್ಲಿನ ಆ ಕಪ್ಪು ಮಚ್ಚೆಯ
ವಿವರಿಸಲು ಪದಗಳೇ ಸಾಲದು!!

ಚಂದಿರನ ಕಾಂತಿಯ ಚಲುವಿಗೆ
ಚಂದವು ಈ ಗಲ್ಲದ ಕಪ್ಪು ಮಚ್ಚೆ!!
ಅಂದವಾದ ರೂಪವ ಆಳುವ
ಸುಂದರ ಈ ಗಲ್ಲದ ಕಪ್ಪು ಮಚ್ಚೆ!!

ಸಲ್ಲದು ಯಾರ ಚಂದದ ರೂಪ
ತಡೆವುದು ಎಲ್ಲ ದೃಷ್ಟಿಯ ಕೂಪ!!
ಅಂದವ ಕಾಯುವ ಕಾವಲು ತಂತ್ರ
ದೃಷ್ಟಿ ಬೊಟ್ಟಿದು ನುಡಿಸಿತು ಮಂತ್ರ!!

- ಪಿ.ಜಿ.ಜ್ಯೋತಿ

17 Aug 2017, 10:56 am
Download App from Playstore: