ಮನಸಿನ ಮೌನ

ಅವನ ನೋಡಿದಾಗ ಮನಸಿನ ಮೌನ
ಹೊರಬಂದು ನನ್ನನ್ನು ಆವರಿಸಿ
ಮಾತನಾಡದೇ ಬರೀ ನೋಟದಲ್ಲೇ
ನಡೆಸಿತೇ ಮೌನದ ಚಳುವಳಿ!!

ಆವನ ಆಣತಿಗಾಗಿ ಕಾದು ಕುಳಿತ
ಈ ಮನದ ಮೌನದ ಅಪೇಕ್ಷೆಯು
ಅವನು ಆಡುವ ಸವಿ ನುಡಿಗಳ ಜೊತೆ
ಬೆರೆಯ ಬೇಕು ಎ‌ನ್ನುವುದು ಅಷ್ಟೇ!!

ಈ ನನ್ನ ನೋಟವನ್ನು ಅವನು
ಕಂಡೂ ಕಾಣದಂತೆ ನಟಿಸಿ ಹೊರಟ
ಆದರೂ ಈ ನನ್ನ ಮೌನದ ಹಿಂದಿನ
ಸಂಭಾಷಣೆ ಅವನಿಗಾಗೇ ಕಾದಿದೆ!!

- ಪಿ.ಜಿ.ಜ್ಯೋತಿ

17 Aug 2017, 11:26 am
Download App from Playstore: