ಗೆದ್ದಲಿಗೆ ಇದ್ದಿಲಿನ ಆಸರೆ

ಬೆಂಕಿಯಲಿ ದಹಿಸಿದ ಮರವೊಂದು
ಕಪ್ಪಾಗಿ ನೆಲಕ್ಕುರುಳಿತ್ತು ಇದ್ದಿಲಾಗಿ!!
ಅದೆಸ್ಟೋ ಕಾಲ ಯಾರಿಗೂ ಬೆಡವಾಗಿ
ಬಿದ್ದಲ್ಲೇ ಇದ್ದಿತ್ತು ಏಕಾಂಗಿಯಾಗಿ!!

ಗುಂಪಿದ ದೂರಾದ‌ ಗೆದ್ದಲು ಹುಳುವೊಂದು
ತುಂಬು ಗರ್ಭಿಣಿಯಾಗಿ ಅಲೆದಿತ್ತು ಆಸರೆಗಾಗಿ!!
ಇದ್ದಿಲನು ಕಂಡು ಗೆದ್ದಲು ಬಳಿಬಂದು
ಕೈ ಮುಗಿದು ಆಸರೆಯ ಬೇಡಿತ್ತು ಇದ್ದಿಲಲ್ಲಿ!!

ಗೆದ್ದಲನು ಕಂಡು ಇದ್ದಿಲು ಮನ ಕರಗಿ
ಆಸರೆಯ ನೀಡಿತ್ತು ಒಂಟಿ ಹುಳುವೆಂದು!!
ಇದ್ದಿಲಿನ ಆಸರೆಯಲ್ಲಿ ಗೆದ್ದಲು ಮೊಟ್ಟೆ ಇಟ್ಟು
ಸಂತಾನ ಬೆಳೆಸಿತ್ತು ಬಲು ಸಂತಸದಿಂದ!!

ಗೆದ್ದಲಿನ ಸಂತಾನ ಬಳ್ಳಿಯಂತೆ ಹಬ್ಬಿ
ಸುತ್ತುವರಿದು ಆವರಿಸಿತ್ತು ಇದ್ದಿಲನ್ನು!!
ಚೂರು ಬೆಳಕನು ಕೋರಿ ಇದ್ದಿಲು ಬೇಡಿದರೂ
ಕೇಳದೇ ಗುಡುಕಟ್ಟಿ ಗೆದ್ದಲು ನಲಿದಾಡಿದವು!!

ಇದ್ದಿಲಿನ ಸಹಾಯವನ್ನು ಮರೆತಿರುವ ಗೆದ್ದಲು
ಕೃತಜ್ನತೆಯ ತೋರದೇ ಮೆರೆದಾಡಿದವು!!
ಇದ್ದಿಲನ್ನು ಕೊರೆವ ಆಟವಟಡಿತು ಗೆದ್ದಲು
ಮಣ್ಣಲ್ಲಿ ಮಣ್ಣಾಗಿ ಅಸುನೀಗಿತು ಇದ್ದಿಲು!!

- ಪಿ.ಜಿ.ಜ್ಯೋತಿ

17 Aug 2017, 07:51 pm
Download App from Playstore: