ಪ್ರಕೃತಿ

ಅಬ್ಬಾ ಎರಡು ಕಣ್ಣು ಸಾಲದು
ಅಂದದ ಚಂದದ ಸುಂದರ ಪರಿಸರ

ನಿಸರ್ಗ ದೇವತೆಯೇ ಹಾಯಾಗಿ ಮಲಗಿದಂತೆ
ಭಾಸ್ಕರನ ಕಿರಣ ಕಣ್ಣಿಗೆ ಬಡಿದಂತೆ
ಮಳೆಯಾ ಹನಿ ಮೊಗವನ್ನು ಸೋಕಿದಂತೆ
ತಣ್ಣನೆಯ ಗಾಳಿ ಚಳಿಯಾಗಿ ಬಂದಂತೆ

ಎತ್ತರೆತ್ತರ ಬೆಟ್ಟಗಳು,ಮುಂಜಾನೆಯ ಮಂಜುಗಳು,
ಹಕ್ಕಿಗಳ ಚಿಲಿಪಿಲಿ ಕಲರವಗಳು,
ಮೋಡದ ಓಟಗಳು,ನವಿಲಿನ ನಾಟ್ಯಗಳು
ಹರಿವ ನದಿಯ ಜುಳುಜುಳು ಸದ್ದುಗಳು

ಎಲ್ಲಾ ವಿಸ್ಮಯಗಳ ಕಣ್ಣಾರೆ ನೋಡಿದ ಈ ಕಣ್ಣುಗಳು
ಜನುಮ ಜನುಮದಾ ಪುಣ್ಯಗಳು.....

- AnilHegde

18 Aug 2017, 07:34 pm
Download App from Playstore: