ಹೃದಯದರಮನೆ
ನನ್ನನು ಏಕಾಂಗಿಯಾಗಿಸಿ
ಬಹುದೂರ
ಸಾಗಿರುವೆಯಲ್ಲ ನೀನು!
ನೀ ನನ್ನ ದೂರಮಾಡಿದರೂ
ದಿನವೂ ನನಗೆ
ತಾಳಲಾಗದಷ್ಟು ಹೃದಯಬೇನೆ!
ಕಣ್ಣಿಂದ ಮರೆಯಾದ ಮೇಲೆ
ಮನಸ್ಸಿಂದ ದೂರಾಗಲು
ನೆಪವೇಕೆ?
ಒಪ್ಪಿಕೊಂಡ ಹೃದಯದಲ್ಲೀಗ
ನೀಬಿಟ್ಟು ಹೋದಂತಹ
ಸಿಹಿನೆನಪುಗಳು ಕಾಡುತ್ತಿವೆ!
ಉಸಿರಿನ ಕಣಕಣದಲ್ಲಿ
ಸೂಚನೆ ಇಲ್ಲದ
ನಿನ್ನದೇ ಯೋಚನೆ.
ನಿನ್ನ ನೆನಪಿನಂಗಳದಲ್ಲಿ
ಹುಸಿಕನಸಿನ ಜೊತೆಯಲ್ಲಿ
ಮತ್ತೆ ನಿನಗಾಗಿ ಕಾಯುತ್ತಿದೆ
ನನ್ನ ಈ ಪ್ರೀತಿಯ
ಹೃದಯದರಮನೆ!
- ಪ್ರಿಯಾಂಕ
19 Aug 2017, 07:29 pm
Download App from Playstore: