ನೆನಪೆಂಬ ಕೈಪಿಡಿ

ನೆನಪೆಂಬ ಕೈಪಿಡಿಯಲ್ಲಿ
ಬರೀ ನಿನ್ನದೇ ಬರವಣಿಗೆ!!
ಓದಿದರೂ ತೀರದ ಪುಟಗಳ
ಸಾಲು ಸಾಲು ಮೆರವಣಿಗೆ!!

ಅಚ್ಚರಿಯ ವಿಷಯವದು
ನೀ ನನ್ನ ಪ್ರೀತಿಸಿದ ಬಗೆ!!
ಪ್ರೀತಿಸಿಯೂ ದೂರವಾದೆ
ಒಂದು ಮಾತೂ ಹೇಳದ ಹಾಗೆ!!

ಕೊನೆವರೆಗೂ ಕಾದಿಡುವೆ
ನಿನ್ನ ನೆನಪಿನ ಈ ಕೈಪಿಡಿಯ!!
ಮತ್ತೆ ಕಾದಿವೆ ಅಸಂಖ್ಯ
ಪುಟಗಳು ನಿನ್ನ ಬರವಣಿಗೆಗೆ!!

ಎಂದಾದರೂ ಒಂದೊಮ್ಮೆ
ಬರೆಯುವ ಮನಸು ಮಾಡು!!
ಬರೆದು ಪೂರ್ಣಗೊಳಿಸಿ
ಈ ಕೈಪಿಡಿಗೆ ಒಂದು ಅರ್ಥ ತಾ!!

- ಪಿ.ಜಿ.ಜ್ಯೋತಿ

20 Aug 2017, 08:42 am
Download App from Playstore: