ಅರಗಿಣಿಯ ಮಾತು

ಅರಗಿಣಿಯ ಕಂಠದಿಂದ
ಹೊರಬಂದ ಸವಿ ಮಾತೊಂದು
ಹಿತ ನೀಡಿ ಮುದಗೊಳಿಸಿತು ನನ್ನ
ಅದು ನುಡಿದಿರುವ ಮಾತು ಬಲು ಚೆನ್ನ!!

ಹೆದರಿ ಹೆದರಿ ನುಡಿಯದೇ ಗಿಣಿಯು
ನೇರವಾಗಿ ನುಡಿಯುವಾಗ
ಮಾತು ಮರೆತ ಮೌನಿಯಂತೆ
ಬೆರಗಾಗಿ ಹೋದೆ ನಾನು ಅದ ಕೇಳುತ!!

ಬಿಂಕದ ಬಿಗುಮಾನ ಚೆನ್ನ
ವಯ್ಯಾರದ ವರೆಸೆಯು ಚೆನ್ನ
ಅಪರೂಪವಾದ ಈ ಅರಗಿಣಿಯು
ಸೊಕ್ಕಿ ನುಡಿಯುವ ಮಾತು ಬಲು ಚೆನ್ನ!!

ಮೋಹದಿಂದ ನೋಡುತ ನನ್ನ
ಮಾತನಾಡಿ ಕಾಡುವ ಗಿಣಿಯು
ಹೆಗಲೇರಿ ಕುಳಿತ ಪರಿ ಚೆನ್ನ
ನನ್ನ ಮಾತಿಂದ ಸೆಳೆದ ಪರಿ ಚೆನ್ನ!!.

- ಪಿ.ಜಿ.ಜ್ಯೋತಿ

20 Aug 2017, 08:54 am
Download App from Playstore: