ಕನ್ನಡಿಯ ಮೇಲಿನ ನವಿಲು ಗರಿ

ಅಂದು ಕನ್ನಡಿಯ ಮೇಲೆ‌ ನೀನು
ಇಟ್ಟು ಹೋದ ನವಿಲುಗರಿಯು
ರಾರಾಜಿಸುತ್ತ ಇತ್ತು ನಿನ್ನ ನೆನಪಿಂತೆ!!

ನನ್ನ ಎದುರಿಗೆ ನೀ ನಿಂತು ನಗುವಂತೆ
ಆ ನವಿಲು ಗರಿಯ ಪ್ರತಿಬಿಂಬವ
ಕನ್ನಡಿಯಲ್ಲಿ ನೋಡಿ ಭಾಸವಾಗುತಿತ್ತು!!

ತನ್ನ ಸುಂದರ ರೂಪವ ನೋಡಿ
ಆ ನವಿಲು ಗರಿಯೂ ಬೀಗುತ್ತಿದ್ದ ಪರಿ
ಕ್ಷಣ ಕ್ಷಣಕ್ಕೂ ನಿನ್ನನ್ನು ನೆನಪಿಸುತ್ತಿತ್ತು!!

ಆದರೆ ‌ಅದಾವುದೋ ಬಿರುಗಾಳಿ
ಸದ್ದಿಲ್ಲದೇ ಬಂದು ನಿನ್ನ ನೆನಪಿನ
ನವಿಲು ಗರಿಯನ್ನು‌ ಹೊತ್ತು ಹೋಯಿತು!!

ಇಂದು ಮನಸಾರೇ ಪ್ರೀತಿಸಿದ ನೀನೂ ಇಲ್ಲ
ನಿನ್ನ ನೆನಪಾಗಿ ಕನ್ನಡಿಯ ಮೇಲೆ
ನಗುತ್ತಿದ್ದ ಆ ನವಿಲು ಗರಿಯೂ ಇಲ್ಲ!!

- ಪಿ.ಜಿ.ಜ್ಯೋತಿ

20 Aug 2017, 10:31 am
Download App from Playstore: