ಮೌನದ ಆಚರಣೆ

ಉರಿಯುತ್ತಿರುವ ಮೇಣದ ಬತ್ತಿ ಕೈಯಲ್ಲಿ‌
ಹಿಡಿದು‌ ನಾ ಮಾಡುತ್ತಿರುವ ಮೌನದ ಆಚರಣೆ
ಬದುಕಿನ ಯಾವದೇ ಶೋಕ ಕ್ಕಾಗಿ ಅಲ್ಲ!!

ನಿನ್ನ ಪ್ರೀತಿ ಮಾಡಿ ಮೋಸ ಹೋದ ತಪ್ಪಿಗೆ
ನನ್ನ ಆತ್ಮದ ನೆಮ್ಮದಿಗಾಗಿ‌ ಇಂದು ನಾನು ಮಾಡುತ್ತಿರುವ ಅಪರೂಪದ ಪ್ರಾಯಶ್ಚಿತ್ತ!!

ಅರಿತೋ ಅರಿಯದೆಯೋ ನನ್ನ ಬದುಕಿನಲ್ಲಿ
ಬಂದ ನಿನ್ನ ತೊಡೆದು ಹಾಕಿದ ಈ ನನ್ನ
ಅಂತರಂಗಕ್ಕೆ ನಾ ಸಲ್ಲಿಸುತ್ತಿರುವ ಅಭಿನಂದನೆ!!

ಅಗ್ನಿಯಂತೆ ಉರಿಯುತ್ತಿರುವ ನಾನು
ಹಾಗೆಯೇ ಮೇಣದಂತೆ ಕರಗುತ್ತಿರುವ ನೀನು
ಇನ್ನೆಂದೂ ಸೇರಬಾರದೆಂಬುದೇ ನನ್ನ ಶಪಥ!!

- ಪಿ.ಜಿ.ಜ್ಯೋತಿ

20 Aug 2017, 11:13 am
Download App from Playstore: