ಮರುಕಳಿಸಿದ ವೇದನೆ
ಮಳೆರಾಯ ಇಳೆಗೆ
ಜಾರಿದಾಗ
ಕಂಬನಿಯು ಕೆನ್ನೆಗೆ
ತಾಗಿತಾಗ
ಅಗಲಿದ ಇನಿಯನ
ನೆನಪಾಯಿತಾಗ
ಮನೆಯ ಮಾಲಿಕನು
ಮನೆಯ ತೊರೆ ಎಂದಾಗ
ಹಸುಗೂಸುಗಳ ಅಂಗೈಯಲ್ಲಿಟ್ಟು
ದೂರಾದೆ ನೀ ನನ್ನ ಬಿಟ್ಟು
ನಿನ್ನ-ನನ್ನವರು ನೆರವಾಗಿ
ವರವಾಗಲಿಲ್ಲ ನನ್ನಬಾಳಿಗೆ
ಆಸರೆಯಾದವರಿಗೆ
ನಾನೇನೆನ್ನಲಿ ಅವರ ಮಾತಿಗೆ
ಕಂಬನಿದಾರೆಯ ಕೊಡವದೆ
ನಡೆದೆನು ಬೀರುತ
ಬಲವಂತದ ಹುಸಿನಗೆ
ಶಾರಧ
- ಶಕುಂತಲಾ
21 Aug 2017, 01:55 pm
Download App from Playstore: