ಗಾಳಿ ಹೇಳುತ್ತಿದೆ.............
ಗಾಳಿ ಹೇಳುತ್ತಿದೆ ಮನಸೇ
ಮೆಲ್ಲಗೆ ನೆನೆಯೇ ನಿನ್ನವನ ಎಂದು............
ನೆನ್ನೆಯ ಅವನಿಲ್ಲದ ಕನಸನ್ನು ನಾಳೆಗೆ ನೆನೆಯದಿರು ನೋವಾಗಿ ಎಂದು...............
ನುಡಿವ ಮುನ್ನ ಒಂದು ಮಾತು ನೂರುಬಾರಿ ನೆನೆಯದಿರೆ ಅವನ ನಗುವನ್ನು ಎಂದು........
ಗಾಳಿ ಹೇಳುತ್ತಿದೆ ಮನಸೇ
ಮೆಲ್ಲಗೆ ನೆನೆಯೇ ನಿನ್ನವನ ಎಂದು............
ನೆನೆ ನೆನೆದು ನಿನ್ನನ್ನು ನೀನೇ ಮರೆಯುವ ಹಾಗೆ ಮತ್ತೆ ಮತ್ತೆ ನೆನೆಯದಿರೆ ಅವನನ್ನು ನಿನ್ನ ನೆನಪಲ್ಲೆ ನಿರಂತರ ಬಂಧಿಸುವ ಹಾಗೆ ನೆನೆಯದಿರೆ ಎಂದು...
ಕರಗಿದ ನಸುಗೆಂಪು ನಾಚಿಕೆಯಂತೆ ನಿನ್ನಲ್ಲೇ ಉಳಿದಿರುವ ವರೆಗೂ ಕರೆ ಕರೆದು ಅವನ ಹೆಸರ ಉಸಿರಾಟ ವೇಗದೊಂದಿಗೆ ನೆನೆಯದಿರೆ ಎಂದು....
ಗಾಳಿ ಹೇಳುತ್ತಿದೆ ಮನಸೇ
ಮೆಲ್ಲಗೆ ನೆನೆಯೇ ನಿನ್ನವನ ಎಂದು...............
- ಚುಕ್ಕಿ
21 Aug 2017, 07:30 pm
Download App from Playstore: