ಕವಿಯ ಕವನ

ನೋವಿಗೂ ಒಂದು ಕವನ
ನಲಿವಿಗೂ ಒಂದು ಕವನ
ಎಲ್ಲ ಭಾವಕ್ಕೂ ಒಂದು ಕವನ
ಬರೆಯುವವನು ಕವಿಯು!!

ಕವಿಯ ಮನಸಿನ ಭಾವನೆ
ಅದ್ಭುತವಾದ ಒಂದು ಕಲ್ಪನೆ!!
ಸುಂದರ ಯೋಚನೆಯ ಜೊತೆ
ಅತಿ ಸುಂದರ ಆಲೋಚನೆ!!

ಕವನ ಬರೆಯಲು ಕುಳಿತ
ಕವಿಯ ದೃಷ್ಟಿಯು ಅನಂತ!!
ಮರು ಭೂಮಿಯಲ್ಲಿಯೂ
ಕಂಡನು ಅವನು ವಸಂತ!!

ಒಂದು ಸನಿಹದ ದಾರಿಗೆ
ಗಾವುದ ದೂರದ ಬರವಣಿಗೆ!!
ಗಾವುದ ದೂರದ ಕಲ್ಪನೆಯಿಂದ
ಸಾಲು ಕವನಗಳ ಮೆರವಣಿಗೆ!!

ಕವಿಯೇ ಕವನಗಳ ಜನಕ
ಕವನವೇ ಆತನ ಭವ್ಯ ಲೋಕ!!
ಕವಿಯ ಅಂತರಂಗದ ಭಾಷೆಯೇ
ಒಂದು ಸುಂದರ ಕವನ!!

- ಪಿ.ಜಿ.ಜ್ಯೋತಿ

22 Aug 2017, 10:32 am
Download App from Playstore: