ಕವನದ ಮೂಲ
ಕಲ್ಪನೆ ಕವನದ
ತೋರಿಕೆಯ ತಡಿಕೆ
ಕವಿಯ ಅನುಭವವೆ
ಕವನದ ಆತ್ಮ
ಕಲ್ಪನೆಯು ಪದಗಳ
ಅಲಂಕಾರ
ಅನುಭವವು ಕವನದ
ಆಧಾರಸ್ತಂಭ
ಬರಿಯ ಕಲ್ಪನೆಯಿಂದ
ಕವನ ಅಪೂರ್ಣ
ಅನುಭವದಿಂದ ಹೊಮ್ಮಿದ
ಕವನವೇ ಪೂರ್ಣ
ಕವನವು ಕವಿಯ
ನೋವು-ನಲಿವಿನ ಪ್ರತೀಕ
ಅನುಭವದಿಂದ ಉದಯಿಸಿದ
ಕವನವು ಅಜರಾಮರ
ಶಾರಧ
- ಶಕುಂತಲಾ
22 Aug 2017, 12:40 pm
Download App from Playstore: