ಹೂ ಬಳ್ಳಿಯ ಪ್ರಾರ್ಥನೆ

ನಾ ಅರಳಿಸಿದ ಹೂವನ್ನ
ಕೂಡಬಹುದು ದುಂಬಿಯೊಂದು
ನನ್ನಲ್ಲಿಯ ಸಿಹಿಯನ್ನ ಹೀರಿ
ಕಟ್ಟಬಹುದು ಜೇನು ಸಿಹಿಗೂಡೊಂದು
ಓ ಆಕಳೆ ನೀ ಬಂದು ಉಣ್ಣದಿದ್ದರೆ !

ನಾ ಕೊಡುವ ಹೂವೊಂದು
ಸೇರಬಹುದು ಸರಸ್ವತಿಯ ಪಾದುಕೆಗೆ
ಸೇರಬಹುದು ಸೌಭಾಗ್ಯವತಿಯ
ಅಂದದ ಮುಡಿಗೆ
ಓ ಆಕಳೆ ನೀ ವರವನಿತ್ತರೆ!

ಅಸಾಧಾರಣ ವ್ಯಕ್ತಿಯ ಅಭಿನಂದನೆಯಲ್ಲಿ
ನಾ ಪಾಲುದಾರಳಾಗಬಹುದು
ಮಹಾನ್ ಚೇತನಗಳ ಕೊರಳನ್ನು
ನಾ ಅಲಂಕರಿಸಬಹುದು
ಓ ಆಕಳೆ ನೀ ದಯೆತೋರಿದರೆ!

- ಶಕುಂತಲಾ

22 Aug 2017, 01:19 pm
Download App from Playstore: