ಶೈಲಿ

ಮೇರು ಕವಿಗಳ
ಶೈಲಿಯ ಸವಿಯ
ನಾ ಪಡೆವೆನೆ
ಅದರ ಒಂದಿನಿತು
ಇಂದಲ್ಲ-ನಾಳೆ?

ಒಂದು ಪದದಿ ಎನಿತು
ಅರ್ಥ ಹೊಕ್ಕಿಹುದು
ಶೋಧಿಸಿದಷ್ಟು
ವಿಸ್ತಾರವಾಗಿಹುದು!

ಪದಪುಂಜಗಳ ಮಾಲೆಯ
ಪೋಣಿಸುವರು
ಪ್ರಕೃತಿ ವರ್ಣನೆಯ
ಮೇರೆ ಮೀರುವರು!

ಸಹೃದಯನ ಮನದಲ್ಲಿ
ನವರಸಗಳ ಹರಿಸುವರು
ತಾಯಿ ಶಾರದಾಂಭೆಯ
ಕರುಳಕುಡಿಗಳಿವರು!



ಶಾರಧ

- ಶಕುಂತಲಾ

22 Aug 2017, 02:01 pm
Download App from Playstore: