ಯಾವುದೂ ಉಳಿದಿಲ್ಲ

ಪಂಡಿತನಿಗೂ ಇಲ್ಲ ಪಾಮರನಿಗೂ ಇಲ್ಲ
ಯಾರಿಗೂ ಏನೇನೂ ಕೊನೆವರೆಗೆ ಉಳಿದಿಲ್ಲ!!
ನೀ ಇರುವವರೆಗೆ ನಿನ್ನದಾಗಿರುವುದು ಎಲ್ಲ
ನೀ ಸತ್ತ ಮೇಲೆ ಪರರ ಸ್ವಾಧೀನವಾಯಿತಲ್ಲ!!

ಬೇಕು‌ ಎ‌ನ್ನುವ ನೀನು ಗಳಿದಸಿದ್ದೇ ಎಲ್ಲ
ಉಳಿಸಿಕೊಳ್ಳಲು ನಿನ್ನ ನಿನಗೆ ನೇ ತಿಳಿದಿಲ್ಲ!!
ಏಕೆ ಹೀಗೆ ಎಂಬ ಪ್ರಶ್ನೆಗೆ ಉತ್ತರ ನಿನ್ನಲಿಲ್ಲ
ಆದರೂ ನನ್ನದು ಎಂಬ ಹಠವ ‌ನೀ ಬಿಡಲಿಲ್ಲ!!

ನಾನೂ ನನ್ನದು ಎಂಬುದು ಎಂದೂ ನಿನ್ನದಲ್ಲ
ಮಾಡಿರುವ ಪಾಪ ಪುಣ್ಯಗಳ ಲೆಕ್ಕ ನಿನ್ನಲಿಲ್ಲ!!
ಬದುಕಿದ್ದಾಗ ನೆಮ್ಮದಿಯ ನೀ ಕಾಣಲಿಲ್ಲ
ಸತ್ತಾಗ ಬೇಕೆಂದರೂ ಯಾರೂ ನಿನ್ನ ಜೊತೆ ಇಲ್ಲ!!

- ಪಿ.ಜಿ.ಜ್ಯೋತಿ

22 Aug 2017, 04:08 pm
Download App from Playstore: