ಕಾದಿಹುದು ನಿನಗಾಗಿ
ಆಶಾಡದ ಗಾಳಿಗೆ ಮೈ ಒಡ್ಡಿ ನಿಂತಿರುವೆ
ಚಳಿಯಲ್ಲಿಯೂ ನಾ ನಿನ್ನ ನೆನೆಯುತ!!
ನೀ ಬಂದು ಬಿಗಿದು ಅಪ್ಪಿ ಒಮ್ಮೆ ನನ್ನ
ಬಿಸಿ ಉಸಿರನು ಸೋಕಿಸಿ ಮುದಗೊಳಿಸು!!
ನಿನಗಾಗಿ ಕಾದು ಕಾದು ಕಲ್ಲಾಗಿರುವೆನು ನಾ
ಕಲ್ಲನೂ ಕರಗಿಸುವ ಕಲೆಯ ಅರಿತವಳು ನೀ!!
ಮನಸು ಮಾಡಿ ಒಮ್ಮೆ ನೀ ಇಲ್ಲಿ ಬಂದು
ನನ್ನ ಈ ಬಂಡೆದೆಗೆ ಹೂ ಎರಚಬಾರದೇ!!
ವಿರಹದ ಬೇಗೆಯಲಿ ಕುಸಿದಿಹುದು ಈ ಮನವು
ನೋವಿನಲ್ಲೇ ಕಾದಿರುವೆ ನಾ ನಿನ್ನ ಬರುವ!!
ಕಾಯಿಸದೇ ನೀ ಬೇಗ ಬಂದು ಸೇರಿಕೋ ನನ್ನ
ನನ್ನ ಬೆಚ್ಚನೆಯ ಪ್ರೀತಿ ಕಾದಿಹುದು ನಿನಗಾಗಿ!!
- ಪಿ.ಜಿ.ಜ್ಯೋತಿ
22 Aug 2017, 04:26 pm
Download App from Playstore: