ಮನ್ನಿಸು

ನಿನ್ನ ಮನದ ಬಯಕೆಯ
ನಾ ಅರಿಯದಾದೆ
ನಿನ್ನ ಒಲವ ಬಯಸದೆ
ಅರೆಕಾಲ ದೂರಾದೆ
ಒಮ್ಮೆ ಮನ್ನಿಸೆಯ,ಓ ಇನಿಯ?

ಹಾಲ ಬೆಳದಿಂಗಳಲು
ಕಗ್ಗತ್ತಲೆಯಲಿ ನಾ ಅಲೆದೆ
ಶಶಿಗೆ ಕಾರ್ಮೋಡ ಕವಿದಿರಲು
ಅಶಾಶ್ವತವೆಂದು ತಿಳಿಯದಾದೆ
ನನ್ನನೊಮ್ಮೆ ಮನ್ನಿಸೆಯ,ಓ ನಲ್ಲನೆ?

ಅನಂತಚಕ್ರದಲ್ಲಿ ಬಂದಿಯಾಗಲು
ಬೆದರಿದೆನಂದು
ಸಂಸಾರ ಸಾಗರದಲ್ಲಿ
ಮಿಂದೆದ್ದಿಹೆನಿಂದು
ನಿನ್ನವಳೆ ನಾನೆಂದು ಅರಿವೆಯ,ಓ ಗೆಳೆಯ?

ಸಾಧನೆಯ ಮರೀಚಿಕೆಯಲ್ಲಿ
ಸಾಧಿಸುವ ಛಲದಿಂದ
ವಿರಹದ ಬೆಗೆಯಲ್ಲಿ
ಬೆಂದೆ ನೀ ನನ್ನಿಂದ
ಒಮ್ಮೆ ಮನ್ನಿಸೆಯ ,ಓ ಇನಿಯ?



ಶಾರಧ

- ಶಕುಂತಲಾ

23 Aug 2017, 03:11 am
Download App from Playstore: