ತನುವಿನ ಕೋಟೆ
ನಲ್ಮೆಯ ಗೆಳೆಯ ಪ್ರೀತಿಯ ಇನಿಯ
ಮುಗಿಲೆತ್ತರದ ಪ್ರೇಮ ನಮ್ಮದು!!
ಬಿಸಿ ನೆತ್ತರು ಪ್ರತೀ ಕ್ಷಣವೂ
ಅದನ್ನು ಸರಾಗವಾಗಿ ಬಿಂಬಿಸುತ್ತಿರುವುದು!!
ನನ್ನ ತನುವಿನ ಕೋಟೆಯನ್ನು
ಆಳುತ್ತಿರುವ ಏಕೈಕ ದೊರೆ ನೀನು!!
ನಿನ್ನ ಆಗಮನದ ನಂತರ ಈ ಬದುಕಿನಲ್ಲಿ
ತುಂಬಿಹುದು ಬರೀ ಸಂಭ್ರಮದ ಕ್ಷಣಗಳೇ!!
ಹೃದಯ ಕೋಣೆಯ ನಾಲ್ಕು ಬಾಗಿಲ
ಒಳಗೆ ಇರುವುದು ನಿನ್ನಯ ಆಲಯ!!
ಯಾವ ಬಾಗಿಲನ್ನು ನೀ ತೆರೆದರೂ
ಸುತ್ತಿಯೇ ಬರಬೇಕು ನನ್ನ ನರ ನಾಡಿಯ!!
ಪ್ರತೀ ಕ್ಷಣವೂ ನೀ ನನ್ನ ತನುವಿನೊಳಗೆ
ಸಂಚರಿಸಿ ನನ್ನಲ್ಲಿ ಜೀವ ಕಳೆ ತುಂಬು!!
ಅರೆ ಕ್ಷಣ ನೀನು ಮರೆಯಾದರೂ
ಈ ಕೋಟೆ ಸದ್ದಿಲ್ಲದೇ ಸಮಾಧಿಯಾದೀತು!!
- ಪಿ.ಜಿ.ಜ್ಯೋತಿ
23 Aug 2017, 08:33 am
Download App from Playstore: