ತಾಯಿ ಭಾರತೀ

ಹೊಕ್ಕಳ ಬಂಧವಿಲ್ಲ
ಹೆತ್ತವಳು ಇವಳಲ್ಲ
ಹೊತ್ತು ನಮ್ಮ ಸಲಹುತಿಹಳು
ಭಾರತೀ ತಾಯಿ ಭಾರತೀ!!

ಮೂರು ಬಣ್ಣ ನೂರು ಕಣ್ಣು
ನಮ್ಮ ಅಣ್ಣ ನಮ್ಮ ತಮ್ಮ
ಬಾಂಧವ್ಯ ಬೆಸೆದಿಹಳು
ಭಾರತೀ ತಾಯಿ ಭಾರತೀ!!

ಜಾತಿ ಬೇರೆ ಆದರೇನು
ಕುಲವೊಂದೇ ನಮ್ಮದು
ನೆಮ್ಮದಿಯ ಬದುಕು ಕೊಟ್ಟ
ಭಾರತೀ ತಾಯಿ ಭಾರತೀ!!

ಬಣ್ಣ ಕೊಟ್ಟು ಭಾಷೆ ಕೊಟ್ಟು
ಮಡಿಲಿನಲ್ಲಿ ಜಾಗ ಕೊಟ್ಟು
ಮಮತೆಯಿಂದ ಸಲಹುತಿಹಳು
ಭಾರತೀ ತಾಯಿ ಭಾರತೀ!!

- ಪಿ.ಜಿ.ಜ್ಯೋತಿ

23 Aug 2017, 08:35 am
Download App from Playstore: