ಜ್ಞಾನ ದೇಗುಲದೊಳು

ಜ್ಞಾನ ದೇಗುಲದೊಳು ಅಜ್ಞಾನ ನೀಗಿಸಿ
ಹರಸು ನಮ್ಮ ಶಾರದಮ್ಮ!!
ಲೋಕ ಮಾತೆ ಪೂಜ್ಯ ಧಾತೆ
ನಮ್ಮನೆಲ್ಲ ಹರಸುವಾತೆ!!
!!ಜ್ಞಾನ ದೇಗುಲದೊಳು ತಾಯಿ
ಜ್ಞಾನ ದೇಗುಲದೊಳು!!

ಗಂಗೆ ತುಂಗೆ ತೀರದಲ್ಲಿ
ತಾಯಿ ಶಾರದೆ ಪಾಠವಿಲ್ಲಿ!!
ವೇದ ಮಂತ್ರದ ಬೋಧನೆಯನ್ನು
ಆಲಿಸಿ ಕಲಿತ ಹರುಷವಿಲ್ಲಿ!!
!!ಜ್ಞಾನ ದೇಗುಲದೊಳು ತಾಯಿ
ಜ್ಞಾನ ದೇಗುಲದೊಳು!!

ವಿದ್ಯೆ ಎಂಬ ದಾರಿಯಲ್ಲಿ
ಕೈಯ ಹಿಡಿದು ನಡೆಸುವಾಕೆ!!
ನಮ್ಮ ಮನದ ಶ್ರದ್ಧೆಯಲ್ಲಿ
ತಾನೇ ಬಂದು ನೆಲೆಸುವಾಕೆ!!
!!ಜ್ಞಾನ ದೇಗುಲದೊಳು ತಾಯಿ
ಜ್ಞಾನ ದೇಗುಲದೊಳು!!

ವಿದ್ಯೆಯಲ್ಲಿ ಜ್ಞಾನ ಇಟ್ಟು
ಅಜ್ಞಾನವನ್ನು ಕಳೆಯುವವಳು!!
ಸುಜ್ಞಾನದ ದೀಪ ಹಚ್ಚಿ
ನಮ್ಮ ಬದುಕ ಬೆಳಗುವವಳು!!
‌‌‌ ‌‌ !!ಜ್ಞಾನ ದೇಗುಲದೊಳು ತಾಯಿ
ಜ್ಞಾನ ದೇಗುಲದೊಳು!!

- ಪಿ.ಜಿ.ಜ್ಯೋತಿ

23 Aug 2017, 09:18 am
Download App from Playstore: