ಅಂಬರದಲ್ಲಿ ಚಂದಿರ

ಚಂದಿರನೋರ್ವನು
ಅಂಬರದಲ್ಲಿ
ಹುಣ್ಣಿಮೆ ನಗು ಚೆಲ್ಲಿ!!

ಬೆಳಕನು ಬೀರಿದ
ಬಾನಿನ ತುಂಬ
ರಾತ್ರಿಯ ತಂಪಲ್ಲಿ!!

ಇರುಳನ ಹಂಗನು
ತೊರೆಯುವ ಚಂದಿರ
ಮೂಡಿದ ಬಾನಲ್ಲಿ!!

ರಾತ್ರಿಯ ಕಳೆಯಲು
ನೇಸರ ಉದಿಸಲು
ಚಂದಿರನ ಸುಳಿವೆಲ್ಲಿ!!

- ಪಿ.ಜಿ.ಜ್ಯೋತಿ

23 Aug 2017, 09:35 am
Download App from Playstore: