ಮೇಘದೂತನ ಪ್ರೀತಿ ಹಾಳೆ
ಮೇಘದೂತ ತಂದುಕೊಟ್ಟ
ಪ್ರೀತಿ ಎಂಬ ಹಾಳೆ ಮೇಲೆ
ನಿನ್ನ ಹೆಸೆರ ನಾನು ಬರೆಯಲೇ
ಈ ಪ್ರೀತಿಯನ್ನು ಜಗಕೆ ಸಾರಲೇ!!
ಈ ಗುಡುಗು ಈ ಮಿಂಚು
ತಂದಂತ ಮಳೆ ಹನಿಯು
ನನ್ನೋಳಗೆ ಜಿನುಗಿ ಜಿನುಗಿ
ಹಿತವಾಗಿ ತಂಪು ನೀಡಿದೆ!!
ಎದೆಯೊಳಗೆ ಮಿಡಿದು ಮಿಡಿದು
ಮನದೊಳಗೆ ಹಾರಿ ಕುಣಿದು
ಹೊಸದಾದ ಭಾವವೊಂದು
ಜೀವ ಎತ್ತು ನಗುತ ಕುಳಿತಿದೆ!!
ನನ್ನೊಳಗೆ ಚಿಗುರಿ ಕುಳಿತ
ಆಸೆ ಇಂದು ಭಾರವಾಗಿ
ನನ್ನನ್ನು ಮೌನಗೊಳಿಸಿ
ನಿನ್ನನ್ನು ಸೇರು ಎಂದಿದೆ!!
- ಪಿ.ಜಿ.ಜ್ಯೋತಿ
23 Aug 2017, 10:06 am
Download App from Playstore: