ಪ್ರೇಮದ ಬಯಕೆ

ಒಂಟಿ ಜನುಮಕೆ ತೀರದು
ಈ ನಮ್ಮ‌ ಪ್ರೇಮದ ಬಯಕೆಯು!!
ನೂರು ಜನುಮವು ಸಾಲದು
ಈ ಜೋಡಿ ಬದುಕು ಸಾಗಲು!!

ಕ್ಷಣ ಮಾತ್ರಕೆ ನೀ ಮರೆಯಾದರೂ
ಏನೋ ತಲ್ಲಣ ಈ ‌ನನ್ನ ಜೀವಕೆ!!
ನೀನು ಬಳಿಯೇ ಇದ್ದರೂ
ಸನಿಹ ಸಾಲದು ಈ ತನುವಿಗೆ!!

ನಾನು ನಿನ್ನನು ಕಂಡ ಆ ದಿನ
ನನನ್ನೇ ನಾ ಮರೆತಿರುವ ಸುದಿನ!!
ನಿನ್ನ‌ಒಡನೆ ಬೆರೆತರೂ ಕಡಿಮೆಯೇ
ಸಾಲದೂ ಈ ಜೀವಕೆ!!

ನೀನು ಇಲ್ಲದ ಈ ಜೀವನ
ನಾನು ನೇನೆಯೆನೂ ಅರೆ ಕ್ಷಣವೂ!!.
ಓ ಜೀವದ ಸಂಗಾತಿಯೇ
ನನ್ನ ದೇಹಕೆ ನೀ ಪ್ರಾಣವು!!

- ಪಿ.ಜಿ.ಜ್ಯೋತಿ

23 Aug 2017, 10:43 am
Download App from Playstore: