ಏನೆಂದು ಪ್ರಶ್ನಿಸಲಿ

ಏನೆಂದು ಪ್ರಶ್ನಿಸಲಿ ನನ್ನ ಮನಸನು
ನಿನ್ನ ಪ್ರೀತಿಯ ನನಗೆ ತಿಳಿಸೆಂದು ಈ ಕ್ಷಣ.
ಮತ್ತೊಂದು ಮುಂಗಾರಿನ ಸೇರ್ಪಡೆ ನನ್ನ
ಯವ್ವನಕೆ ನಿನ್ನ ರೂಪದಲ್ಲಿ ಈಗಿಂದು ನೀನಾಗಿ.

ಕರೆಯೊಂದು ಕೂಗಿದಂತೆ ನನ್ನನು ನಿನ್ನೆಡೆಗೆ
ಜಾರದೆ ಎಳೆದುಕೊಂಡಂತೆ ನನ್ನ ಮನಸ್ಸನ್ನು .
ಮಾಮೂಲಿ ಕರೆಯೋಲೆ ನಿನ್ನ ಕನಸಿನ ಕಲ್ಪನೆಯೆಡೆಗೆ ಕಳುಹಿಸುರುವೆ ನಿನ್ನ ಕರೆತರಲು ನನ್ನೆಡೆಗೆ.

ಮಳೆ ಬರುವ ಮುನ್ನ ಗರಿಬಿಚ್ಚಿ ಆಡುವ
ನವಿಳಂತೆ ಕುಣಿಯುತಿರುವೆ ನಿನ್ನ ಆಗಮನಕ್ಕೆ.
ಬದುಕು ನಿನ್ನ ಜೊತೆಗೆ ಮರಣ ನಿನ್ನ ಜೊತೆಗೆ
ಮದ್ಯದಲ್ಲಿನ ಮನಸಿನ ಮಾತುಕತೆ ನಿನ್ನ ಹೃದಯದ ಜೊತೆಗೆ.

ಮೊಡಕರಗಿ ಮಳೆಯಂತೆ ನನ್ನ ಉಸಿರಿನ
ತಾಪತ್ರಯ ನಿನಗೆ ಮುಟ್ಟಿಸಲೆಂದು ಮತ್ತೇರಿ ಬರುತಿದೆ ಈ ಧರೆಗೆ ತಂಪುಣಿಸುವ ಬಗೆಯಲ್ಲಿ.

- ಚುಕ್ಕಿ

24 Aug 2017, 07:53 am
Download App from Playstore: