ಅಪ್ಸರೆ

( ಅಪ್ಸರೆ )

ನನ್ನವಳ ಹ್ರುದಯದ ಪಿಸು ಮಾತಿನ ಸ್ವರಗಳ ಶಬ್ದಕ್ಕೆ ಸ್ತಬ್ದವಾಗಿದೆ ನನ್ನ ಕಿವಿಗಳ ತಮಟೆಗಳು.
ನಿನ್ನ ಸೌಂದರ್ಯವನ್ನು ಕಣ್ತುಂಬಿ ಕೊಳ್ಳಲು
ನನ್ನ ಕಣ್ಣಲ್ಲಿ‌ ಅಡಗಿರುವ‌ ಪಾಪೆಗಳು
ತನ್ನ ರೆಪ್ಪೆಗಳಲ್ಲಿ ಮ್ರುದಂಗದ ರಾಗ ಸಂಯೊಜನೆ ಗೊಳಿಸುತ ನಿನಗಾಗಿ‌ ಕಾದಿವೆ .

ನಿನ್ನ ಸೌಂದರ್ಯವನ್ನು ವರ್ಣಿಸಲು ನನ್ನ ನಾಲಿಗೆಯಲ್ಲಿ ಪದಗಳೆ ಹೊರಡದೆ‌
ನನ್ನ ತುಟಿಗಳು ಬರಡಾಗಿ ಬಂಜರು ಭೂಮಿಯಾಗಿ
ನಿನ್ನ ತುಟಿಯಲ್ಲಿ ಓಮ್ಮೆ ನನ್ನ ನೆನೆದರೆ ಸಾಕು
ಬರಡಾಗಿರುವ‌ ತುಟಿಯು ಚಿಗೊರೆಡೆದ ಗರಿಕೆಯ ಹಾಗೆ ಕಂಗೊಳಿಸುವುದು ಮನವೆ

( ನೆನಪಿನ ನಾವಿಕ ಸಂತೋಷ್ )

- ಸಂತೋಷ್//ಜೀತು

24 Aug 2017, 09:44 am
Download App from Playstore: